Suddi Now News

ಸುಡ್ಡಿ ಈಗ ಸುದ್ದಿ

ಕನ್ನಡ

ಕನ್ನಡ

ನ್ಯೂಸ್

#CVoterSurvey- ಯುಪಿ, ಉತ್ತರಾಖಂಡ್, ಗೋವಾದಲ್ಲಿ ಮತ್ತೆ #BJP; ಪಂಜಾಬ್​ನಲ್ಲಿ #AAPಮೇಲುಗೈ

ನವದೆಹಲಿ : ಉತ್ತರ ಪ್ರದೇಶ (403), ಗೋವಾ (40)ಪಂಜಾಬ್ (117)ಉತ್ತರಾಖಂಡ (70), ಮಣಿಪುರ (60) ರಾಜ್ಯಗಳ ವಿಧಾನಸಭೆ ಚುನಾವಣೆ ಫೆಬ್ರವರಿ ಅಂತ್ಯ ಅಥವಾ ಮಾರ್ಚ್‌ ತಿಂಗಳಿನಲ್ಲಿ ನಡೆಯಬೇಕಿದೆ. ಎಬಿಪಿ-ಸಿ ವೋಟರ್ ಚುನಾವಣಾ ಪೂರ್ವ ಸಮೀಕ್ಷೆ (ABP-CVoter Survey 2022) ನಡೆಸಿದ್ದು, ಉತ್ತರ ಪ್ರದೇಶ, ಮಣಿಪುರ, ಗೋವಾ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲಿ ಬಿಜೆಪಿ (BJP) ಅಧಿಕಾರಕ್ಕೆ ಬರಬಹುದು ಎಂದು ಹೇಳಿದೆ. ಪಂಜಾಬ್ (Punjab) ಫಲಿತಾಂಶ ಅತಂತ್ರವಾಗಲಿದ್ದು, ಆಮ್ ಆದ್ಮಿ ಪಕ್ಷ (AAP) ಕಿಂಗ್ ಮೇಕರ್ ಆಗುವ ಸರ್ವಲಕ್ಷಣಗಳು ಈ ಸಮೀಕ್ಷೆಯಲ್ಲಿ ಕಾಣಿಸುತ್ತಿವೆ.

ಉತ್ತರ ಪ್ರದೇಶ Uttar Pradesh

ಉತ್ತರ ಪ್ರದೇಶದಲ್ಲಿ ಚುನಾವಣೆಯನ್ನು ಸಿಎಂ ಯೋಗಿ ಆದಿತ್ಯನಾಥ್ ಅವರ ಮುಂದಾಳತ್ವದಲ್ಲಿ ಎದುರಿಸಿದ್ರೆ ಶೇ.41ರಷ್ಟು ಮತಗಳನ್ನು ಬಿಜೆಪಿ ಪಡೆಯಬಹುದು. ಸಮಾಜವಾದಿ ಪಕ್ಷ ಶೇ. 32 ಪಡೆದು ಎರಡನೇ ಸ್ಥಾನದಲ್ಲಿರಲಿದೆ. ಇನ್ನುಳಿದಂತೆ ಮಾಯಾವತಿ ನೇತೃತ್ವದ ಬಿಎಸ್‍ಪಿ ಶೇ.15, ಕಾಂಗ್ರೆಸ್ ಶೇ. 6 ಮತಗಳನ್ನು ಪಡೆಯಲಿವೆ ಎಂದು ಸಿವೋಟರ್ ಸರ್ವೆ ಹೇಳಿದೆ.

ಕ್ಷೇತ್ರವಾರು ಗಮನಿಸಿದ್ರೆ ಒಟ್ಟು 403 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 241 ರಿಂದ 249ರಲ್ಲಿ ಗೆಲುವು ಕಾಣಬಹುದು. ಎಸ್‍ಪಿ 130-138, ಬಿಎಸ್‍ಪಿ 15-19 ಮತ್ತು ಕಾಂಗ್ರೆಸ್ 3 ರಿಂದ 7 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆಗಳಿವೆ.

ಪಂಜಾಬ್ Punjab

ಎಬಿಪಿ-ಸಿ ವೋಟರ್ ಸಮೀಕ್ಷೆ ಪ್ರಕಾರ ಪಂಜಾಬ್​ನಲ್ಲಿ ಅತಂತ್ರ ಫಲಿತಾಂಶ ಬರಬಹುದು. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. 117 ವಿಧಾನಸಭಾ ಕ್ಷೇತ್ರದಲ್ಲಿ 49 ರಿಂದ 55 ಕ್ಷೇತ್ರಗಳಲ್ಲಿ ಆಪ್ ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ. ಕಾಂಗ್ರೆಸ್ 30-47, ಅಕಾಲಿದಳ 17-25 ಮತ್ತು ಬಿಜೆಪಿ ಕೇವಲ ಒಂದು ಕ್ಷೇತ್ರದಲ್ಲಿ ಜಯ ಸಾಧಿಸಬಹುದು.

ಪಂಜಾಬ್​ನಲ್ಲಿ ಎಎಪಿ ಶೇ.36, ಕಾಂಗ್ರೆಸ್ ಶೇ. 32, ಶಿರೋಮಣಿ ಅಕಾಲಿದಳ ಶೇ.22, ಬಿಜೆಪಿ ಶೇ.4 ಮತ್ತು ಇತರರು ಶೇ.6ರಷ್ಟು ಮತಗಳನ್ನು ಪಡೆಯಲಿದೆ ಎಂದು ಸರ್ವೆ ಹೇಳಿದೆ,

ಉತ್ತರಾಖಂಡ ಸಮೀಕ್ಷಾ ವರದಿ: Uttarakhand

ಉತ್ತರಾಖಂಡದಲ್ಲಿ ಮತ್ತೊಮ್ಮೆ ಕಮಲ ಅರಳಲಿದೆ. ಇಲ್ಲಿ ಬಿಜೆಪಿ ಶೇ.45, ಕಾಂಗ್ರೆಸ್ ಶೇ.34, ಆಮ್ ಆದ್ಮಿ ಪಾರ್ಟಿ ಶೇ.15 ಮತ್ತು ಇತರರಿಗೆ ಶೇ.6ರಷ್ಟು ಮತ ಸಿಗಲಿವೆ. ಒಟ್ಟು 70 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ 42-46, ಕಾಂಗ್ರೆಸ್ 21-25, ಆಮ್ ಆದ್ಮಿ ಪಾರ್ಟಿ 0-4 ಮತ್ತು ಇತರರು ಎರಡು ಕ್ಷೇತ್ರಗಳಲ್ಲಿ ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ.

ಗೋವಾ Goa

ಇಲ್ಲಿಯೂ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆಗಳಿವೆ. ಒಟ್ಟು 40 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 24-28ರಲ್ಲಿ ಗೆದ್ದು ಶೇ.38ರಷ್ಟು ಮತ ಪಡೆಯಬಹುದು. ಕಾಂಗ್ರೆಸ್ ಶೇ.18, ಆಮ್ ಆದ್ಮಿ ಪಾರ್ಟಿ ಶೇ.23 ಮತ್ತು ಇತರರು ಶೇ.21ರಷ್ಟು ಮತಗಳನ್ನು ಪಡೆಯಬಹುದು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ ಸರ್ಕಾರ ರಚನೆ ಮಾಡುವಲ್ಲಿ ವಿಫಲವಾಗಿತ್ತು.

ಪಡಿತರದಲ್ಲಿ ಕುಚಲಕ್ಕಿ ವಿತರಣೆ: ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ ಸಿಎಂ #redrice

ಮಣಿಪುರ Manipur

ಸರ್ವೆಯ ಪ್ರಕಾರ ಮಣಿಪುರ ಫಲಿತಾಂಶ ಸ್ಪಷ್ಟವಾಗಿಲ್ಲ. ಒಟ್ಟು 60 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 21-25, ಕಾಂಗ್ರೆಸ್ 18-22ರಲ್ಲಿ ಗೆಲುವು ಸಿಗುವ ಅನುಮಾನಗಳಿವೆ. ಸ್ಥಳೀಯ ನಾಗಾ ಪೀಪಲ್ಸ್ ಫ್ರಂಟ್ (ಎನ್‍ಪಿಎಫ್) 4-8ರಲ್ಲಿ ಜಯ ಸಾಧಿಸುವ ಸಾಧ್ಯತೆಗಳಿವೆ. ಇತರರರ ಒಂದರಿಂದ ಐದು ಕ್ಷೇತ್ರಗಳಲ್ಲಿ ಗೆಲ್ಲಬಹುದು. ಶೇಕಡಾವಾರು ಮತಗಳನ್ನು ಗಮನಿಸಿದ್ರೆ ಬಿಜೆಪಿ ಶೇ.36, ಕಾಂಗ್ರೆಸ್ ಶೇ.34, ಎನ್‍ಪಿಎಫ್ (NPF) ಶೇ.9 ಮತ್ತು ಇತರರು ಶೇ.21ರಷ್ಟು ಮತ ಪಡೆಯಬಹುದು.

ಹೆಚ್ಚಿನ ಅಪಾಯ, ರೋಗ ಲಕ್ಷಣಗಳಿಲ್ಲದಿದ್ದರೆ ಕೋವಿಡ್‌ ಪರೀಕ್ಷೆ ಬೇಡ: #ICMR

Amazon.in’s Deals today up to 80%off

admin
Author: admin

admin

Share on facebook
Share on twitter
Share on linkedin
Share on whatsapp

ಮತ್ತಷ್ಟು ಓದು

ಓದಲೇಬೇಕು