Suddi Now News

ಸುಡ್ಡಿ ಈಗ ಸುದ್ದಿ

ಕನ್ನಡ

ಕನ್ನಡ

ನ್ಯೂಸ್

ಹೆಚ್ಚಿನ ಅಪಾಯ, ರೋಗ ಲಕ್ಷಣಗಳಿಲ್ಲದಿದ್ದರೆ ಕೋವಿಡ್‌ ಪರೀಕ್ಷೆ ಬೇಡ: #ICMR #Covid

ನವದೆಹಲಿ, ಜನವರಿ 10: ಹೆಚ್ಚು ಅಪಾಯ ಇಲ್ಲವಾದರೆ ಕೊರೊನಾ ವೈರಸ್‌ ಸೊಂಕಿತರ ಸಂಪರ್ಕಿತರ ಕೋವಿಡ್‌ ಪರೀಕ್ಷೆಯನ್ನು ಮಾಡುವ ಅಗತ್ಯವಿಲ್ಲ ಹಾಗೂ ಯಾವುದೇ ಕೋವಿಡ್‌ ಲಕ್ಷಣಗಳು ಇಲ್ಲವಾದರೆ ಕೋವಿಡ್‌ ಪರೀಕ್ಷೆಗೆ ಒಳಗಾಗಬೇಕಾಗಿಲ್ಲ ಎಂದು ರ್ಕಾರದ ಉನ್ನತ ವೈದ್ಯಕೀಯ ಸಂಸ್ಥೆ ಇಂದು ಹೊಸದಾಗಿ ಸಲಹೆಯನ್ನು ನೀಡಿದೆ.

ಯಾವುದೇ ಕೊರೊನಾ ವೈರಸ್‌ ಸೋಂಕಿನ ಲಕ್ಷಣ ಇಲ್ಲವಾದರೆ, ಹೋಮ್‌ ಐಸೋಲೇಶನ್ ಮಾರ್ಗಸೂಚಿಗಳ ಪ್ರಕಾರ ಬಿಡುಗಡೆಯಾಗುವ ರೋಗಿಗಳು, ಕೋವಿಡ್‌ ಬಳಿಕ ಬಿಡುಗಡೆಯಾದ ರೋಗಿಗಳು ಮತ್ತು ಅಂತರ-ರಾಜ್ಯ ಪ್ರಯಾಣವನ್ನು ಮಾಡಿದವರು ಯಾವುದೇ ಕೋವಿಡ್‌ ಪರೀಕ್ಷೆಗೆ ಒಳಗಾಗಬೇಕಾದ ಅಗತ್ಯವಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಅಥವಾ ಐಸಿಎಂಆರ್ ಹೇಳಿದೆ.

ದೇಶದಲ್ಲಿ ಕೋವಿಡ್‌ ಪ್ರಕರಣಗಳು ಏರಿಕೆ ಕಾಣುತ್ತಿದೆ. ಈ ನಡುವೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಅಥವಾ ಐಸಿಎಂಆರ್ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳುವ ವಿಚಾರದಲ್ಲಿ ಸಲಹೆಯನ್ನು ನೀಡಿದೆ. ಯಾರೆಲ್ಲಾ ಕೋವಿಡ್‌ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು ಹಾಗೂ ಯಾರು ಕೋವಿಡ್‌ ಪರೀಕ್ಷೆಗೆ ಒಳಗಾಗಬೇಕಾಗಿಲ್ಲ ಎಂಬ ಬಗ್ಗೆ ಐಸಿಎಂಆರ್ ಸಲಹೆ ನೀಡಿದೆ.

ಪಡಿತರದಲ್ಲಿ ಕುಚಲಕ್ಕಿ ವಿತರಣೆ: ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ ಸಿಎಂ #redrice

ಯಾರೆಲ್ಲಾ ಕೋವಿಡ್‌ ಪರೀಕ್ಷೆಗೆ ಒಳಗಾಗಬೇಕು?

ಕೆಮ್ಮು, ಜ್ವರ, ಗಂಟಲು ನೋವು, ರುಚಿ ಅಥವಾ ವಾಸನೆ ಇಲ್ಲದಿರುವುದು, ಉಸಿರಾಟದ ತೊಂದರೆ ಮತ್ತು ಇತರಉಸಿರಾಟದ ಸಮಸ್ಯೆಗಳು ಇರುವವರು ಕೋವಿಡ್‌ ಪರೀಕ್ಷೆಗೆ ಒಳಗಾಗಬೇಕು. ಪ್ರಯೋಗಾಲಯದ ದೃಢಪಟ್ಟ ಕೋವಿಡ್‌ ಸೋಂಕಿತರ ಅಪಾಯದಲ್ಲಿರುವ ಸಂಪರ್ಕಿತರು (60 ವರ್ಷಕ್ಕಿಂತ ಮೇಲ್ಪಟ್ಟವರು, ಯಾವುದೇ ಕಿಡ್ನಿ ಸಮಸ್ಯೆ, ಮಧುಮೇಹ ಮೊದಲಾದವು ಇದ್ದವರು), ಅಂತಾರಾಷ್ಟ್ರೀಯ ಪ್ರಯಾಣ ಮಾಡುವವರು, ಭಾರತಕ್ಕೆ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರು ಕೋವಿಡ್‌ ಪರೀಕ್ಷೆಗೆ ಒಳಗಾಗುವಂತೆ ಸೂಚನೆ ನೀಡಲಾಗಿದೆ.

ಯಾರೆಲ್ಲಾ ಕೋವಿಡ್‌ ಪರೀಕ್ಷೆಗೆ ಒಳಗಾಗಬೇಕಾಗಿಲ್ಲ?

ಕೆಮ್ಮು, ಜ್ವರ, ಗಂಟಲು ನೋವು ಮೊದಲಾದ ಯಾವುದೇ ಕೋವಿಡ್‌ ಲಕ್ಷಣಗಳು ಇಲ್ಲದವರು ಕೋವಿಡ್‌ ಪರೀಕ್ಷೆಗೆ ಒಳಗಾಗಬೇಕಾಗಿಲ್ಲ. ಹೆಚ್ಚು ಅಪಾಯ ಇಲ್ಲವಾದರೆ ಕೊರೊನಾ ವೈರಸ್‌ ಸೊಂಕಿತರ ಸಂಪರ್ಕಿತರ ಕೋವಿಡ್‌ ಪರೀಕ್ಷೆಯನ್ನು ಮಾಡುವ ಅಗತ್ಯವಿಲ್ಲ. ಕೋವಿಡ್‌ ಮಾರ್ಗಸೂಚಿಯ ಪ್ರಕಾರ ಹೋಮ್‌ ಐಸೊಲೇಶನ್‌ಗೆ ಒಳಗಾದವರು ಕೂಡಾ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಬೇಕಾಗಿಲ್ಲ. ಅಂತರ-ರಾಜ್ಯ ಪ್ರಯಾಣವನ್ನು ಮಾಡುವವರು ಕೂಡಾ ಕೋವಿಡ್‌ ಪರೀಕ್ಷೆಗೆ ಒಳಗಾಗಬೇಕಾಗಿಲ್ಲ

#Covid #booster shots:ಜ.10ರಿಂದ ವೈದ್ಯಕೀಯ ಸಿಬ್ಬಂದಿಗೆ ಬೂಸ್ಟರ್ ಡೋಸ್  #Omicron

ದೇಶದ 16 ರಾಜ್ಯಗಳಿಗೆ #omicron ಲಗ್ಗೆ

#Covid #booster shots:ಜ.10ರಿಂದ ವೈದ್ಯಕೀಯ ಸಿಬ್ಬಂದಿಗೆ ಬೂಸ್ಟರ್ ಡೋಸ್  #Omicron

Weekend Curfew: ‘ವಾರಾಂತ್ಯ ಕರ್ಪ್ಯೂ’ ಸಂದರ್ಭದಲ್ಲಿ ‘ಬಿಎಂಟಿಸಿ ಬಸ್’ ಸಂಚಾರವಿಲ್ಲ: ಅಗತ್ಯ ಸೇವೆಯ ನೌಕರರಿಗೆ ಮಾತ್ರ ಸೀಮಿತ

admin
Author: admin

admin

Share on facebook
Share on twitter
Share on linkedin
Share on whatsapp

ಮತ್ತಷ್ಟು ಓದು

ಓದಲೇಬೇಕು