Suddi Now News

ಸುಡ್ಡಿ ಈಗ ಸುದ್ದಿ

ಕನ್ನಡ

ಕನ್ನಡ

ನ್ಯೂಸ್

ಮೂಡುಬಿದ್ರೆಯ ಸ್ಫೂರ್ತಿ ವಿಶೇಷ ಶಾಲೆಗೆ ಶಿವಾಯ ಫೌಂಡೇಷನ್ ನಿಂದ ಆರ್ಥಿಕ ನೆರವು

Mumbai: ಸದ್ದಿಲ್ಲದೆ ಮಾಡುವ ಕೆಲಸಗಳು ಎಗ್ಗಿಲ್ಲದೆ ಮುಂದೆ ಸಾಗುತ್ತಿರುತ್ತದೆ ಎಂಬ ಮಾತೊಂದಿದೆ.ಸದಾ ಉತ್ಸಾಹದ ಚಿಲುಮೆಯಂತಿರುವ ಮುಂಬಯಿಯ ಪ್ರತಿಷ್ಠಿತ ಸೇವಾ ಸಂಘಟನೆ ಶಿವಾಯ ಫೌಂಡೇಷನ್ ತೆರೆಮರೆಯಲ್ಲಿ ತನ್ನ ಸೇವಾ ಚಟುವಟಿಕೆಗಳನ್ನು ಮಾಡಿಕೊಂಡು ಅಶಕ್ತರಿಗೆ ತನ್ನಿಂದಾದ ಸಹಾಯವನ್ನು ಮಾಡಿಕೊಂಡು ಬರುತ್ತಿದೆ.
 ಹನಿ ಹನಿ ಸೇರಿದರೆ ಹಳ್ಳ ಎನ್ನುವಂತೆ ಸಮಾನ ಮನಸ್ಕ ಯುವಕ ಯುವತಿಯರು ಸೇರಿಕೊಂಡು ತಾವು ದುಡಿದ ಸಮಾಜಿಕ ಚಟುವಟಿಕೆಗಳಿಗೆ ವಿನಿಯೋಗಿಸುವ ಶಿವಾಯ ಫೌಂಡೇಷನ್ ಹಲವಾರು ಸೇವಾ ಯೋಜನೆಗಳನ್ನು ಪೂರ್ತಿಗೊಳಿಸಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸಗಳನ್ನು ಮಾಡುತ್ತಿದೆ.
ಶಿವಾಯ ಫೌಂಡೇಷನ್ ತಂಡದ ವತಿಯಿಂದ ಮೂಡುಬಿದ್ರೆಯಲ್ಲಿರುವ ಸ್ಫೂರ್ತಿ ಭಿನ್ನ ಸಾಮರ್ಥ್ಯ ಮಕ್ಕಳ ಶಾಲೆಗೆ ಭೇಟಿ ನೀಡಿ ವಿಶೇಷ ಮಕ್ಕಳ ಸೇವೆಯಲ್ಲಿ ತೊಡಗಿರುವ ಎಲ್ಲಾ ಶಿಕ್ಷಕಿಯರು ಮತ್ತು ಸಿಬ್ಬಂದಿಗಳಿಗೆ ವಿಶೇಷ ಉಡುಗೊರೆ ನೀಡಿ ಗೌರವಿಸಲಾಯಿತು.ಮತ್ತು ತಾನು ಮತ್ತು ತನ್ನ ಮಗ  ಅಂಗವಿಕಲನಾಗಿದ್ದರೂ ಕೂಡ ಸಮಾಜದ ವ್ಯಂಗ್ಯದ ಮಾತುಗಳಿಗೆ ಕಿವಿಗೊಡದೆ ವಿಶೇಷ ಮಕ್ಕಳಿಗಾಗಿಯೇ ಸ್ಫೂರ್ತಿ ಎಂಬ ಶಾಲೆಯನ್ನು ಸ್ಥಾಪಿಸಿ ಸುತ್ತಲಿನ ಸಮಾಜಕ್ಕೆ ಸ್ಫೂರ್ತಿಯಾಗಿರುವ ಪ್ರಕಾಶ್ ಶೆಟ್ಟಿಗಾರ್ ಮತ್ತು ಅವರ ಈ ಸಾಮಾಜಿಕ ಕಳಕಳಿಗೆ ನೆರಳಾದ ಧರ್ಮಪತ್ನಿಯನ್ನು ಶಿವಾಯದ ವತಿಯಿಂದ ಸನ್ಮಾನಿಸಿ ಒಂದು ಲಕ್ಷ(100,000) ರೂಪಾಯಿ ಮೊತ್ತದ ಚೆಕ್ ವಿತರಿಸಲಾಯಿತು.
ಈ ಕಾರ್ಯಕ್ರಮದ ವೇಧಿಕೆಯಲ್ಲಿ  ಸತ್ಯವಾಣಿ ವಿದ್ಯಾಪೀಠ ಬೆಂಗಳೂರು ಮತ್ತು  ವಿ.ನಾರಾಯಣ ಸೂಪರ್ ಮಾರ್ಟ್ ಕಿನ್ನಿಗೊಳಿ ಇದರ ನಿರ್ದೇಶಕರು ಮತ್ತು ಶಿವಾಯ ಫೌಂಡೇಷನ್ ಇದರ ಗೌರವಾಧ್ಯಕ್ಷರಾದ ಡಾ.ಎನ್. ವಿ ಪ್ರಸಾದ್ ಶೆಟ್ಟಿ,ಬಂಟರ ಸಂಘ ಪಡುಬಿದ್ರೆ ಇದರ ಯುವ ವಿಭಾಗದ ಅಧ್ಯಕ್ಷರಾದ ನವೀನ್ ಎನ್ ಶೆಟ್ಟಿ,ಚಾವಡಿ ರೈತ ಸಂಘ ಪಲಿಮಾರು ಇದರ ಅಧ್ಯಕ್ಷರಾದ ದೀಪಕ್ ಪೈ ಪಲಿಮಾರು ಮತ್ತು ಯುವ ಉದ್ಯಮಿ ಕೆರಮ ಕಲಾಯಿ ಗುತ್ತು ಪ್ರಸಾದ್ ರೈ ಮುಂತಾದವರು  ಉಪಸ್ಥಿತರಿದ್ದರು.
ಡಾ. ಎನ್.ವಿ ಪ್ರಸಾದ್ ಶೆಟ್ಟಿಯವರು ಶಿವಾಯ ಫೌಂಡೇಶನಿನ ಕೆಲಸಕಾರ್ಯಗಳು ಮತ್ತು ಸಂಸ್ಥೆಯ ಉದ್ದೇಶದ ಬಗ್ಗೆ ವಿವರಿಸುವುದರ ಜೊತೆಗೆ ಸಂಸ್ಥೆಯನ್ನು ಕಟ್ಟಿಬೆಳೆಸಿದ ಪ್ರಕಾಶ್ ಶೆಟ್ಟಿಗಾರ್ ದಂಪತಿಗಳ ಸೇವಾ ಮನೋಭಾವವನ್ನು ಕೊಂಡಾಡಿದರು.ವೇದಿಕೆಯಲ್ಲಿ ಉಪಸ್ಥಿತರಿದ್ದ ಇನ್ನೋರ್ವ ಅತಿಥಿ ನವೀನ್ ಎನ್ ಶೆಟ್ಟಿಯವರು ಶಿವಾಯ ಫೌಂಡೇಶನಿನ ಕೆಲಸಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.ಪ್ರಶಾಂತ್ ಶೆಟ್ಟಿ ಪಲಿಮಾರು ಕಾರ್ಯಕ್ರಮ ನಿರ್ವಹಿಸಿದರು.

ಈ ಸಂಧರ್ಭದಲ್ಲಿ ಪ್ರಶಾಂತ್ ಶೆಟ್ಟಿ ಪಲಿಮಾರು,ಪ್ರಶಾಂತ್ ಶೆಟ್ಟಿ ಪಂಜ,ವಿನೋದ್ ದೇವಾಡಿಗ,ರವಿ ಶೆಟ್ಟಿ ಪಾದೆಬೆಟ್ಟು, ಅಜಿತ್ ಶೇಣವ,ಮಹೇಶ್ ದೇವಾಡಿಗ,ಸಂತೋಷ್ ಬಿ ಶೆಟ್ಟಿ ಪಕ್ಷಿಕೆರೆ,ಶರತ್,ಅಶ್ವಥ್ ಉಪಸ್ಥಿತರಿದ್ದರು.ಕಾರ್ಯಕ್ರಮ ದ ಕೊನೆಗೆ ಮಕ್ಕಳಿಗೆ ಶಿವಾಯದ ಪರವಾಗಿ ಭೋಜನದ ವ್ಯವಸ್ಥೆ ಮಾಡಲಾಗಿತ್ಶವಾಯ ಫೌಂಡೇಶನ್ ನೀಡುತ್ತಿರುವ ಈ ಒಂದು ಲಕ್ಷ ಮೊತ್ತದ ಚೆಕ್ ತುಂಬಾ ಮೌಲ್ಯಯುತವಾದು.ಇದರ ಸದಸ್ಯರು ಹಗಲು ರಾತ್ರಿ ದುಡಿದು ತಾವು ದುಡಿದ ಒಂದಂಶವನ್ನು ನಿಮಗೆ ನೀಡಿದ್ದಾರೆ.ಶಿವಾಯದ ಸದದ್ಯರ ಸೇವಾ ಕಾಳಜಿಗೆ ಬೆಲೆ ಕಟ್ಟಾಲಾಗದು*-ಡಾ.ಎನ್. ವಿ ಪ್ರಸಾದ್ ಶೆಟ್ಟಿ(ನಿರ್ದೇಶಕರು ಸತ್ಯವಾಣಿ ವಿದ್ಯಾಪೀಠ ಮತ್ತು ವಿ.ನಾರಾಯಣ ಸೂಪರ್ ಮಾರ್ಟ್ ಮತ್ತು ಗೌರವಾಧ್ಯಕ್ಷರು ಶಿವಾಯ ಫೌಂಡೇಶನ್)

ಶಿವಾಯ ಫೌಂಡೇಶನಿನ ಕೆಲಸಕಾರ್ಯಗಳನ್ನು ನಾನು ತುಂಬಾ ಹತ್ತಿರದಿಂದ ನೋಡಿದವನು.ಇಂತಹ ಹಲವಾರು ಸೇವಯೋಜನೆಗಳನ್ನು ಶಿವಾಯ ಫೌಂಡೇಶನ್ ಪೂರ್ತಿಗೊಳಿಸಿದೆ*-ನವೀನ್ ಎನ್ ಶೆಟ್ಟಿ(ಅಧ್ಯಕ್ಷರು ಬಂಟರ ಸಂಘ ಯುವ ವಿಭಾಗ ಮತ್ತು ಪಂಚಾಯತ್ ಸದಸ್ಯರು ಪಡುಬಿದ್ರೆ)

ಈ ವಿಶೇಷ ಮಕ್ಕಳ ಕಥೆ ವ್ಯಥೆಗಳ ಬಗ್ಗೆ ನಮಗೆ ಚೆನ್ನಾಗಿ ಅರಿವಿದೆ.ಈ ಮಕ್ಕಳ ಸೇವೆಯಲ್ಲಿ ತೊಡಗಿರುವ ನಿಮ್ಮೆಲ್ಲರನ್ನು ಗೌರವಿಸುವ ಅವಕಾಶ ಅದು ನಮ್ಮ ಪಾಲಿಗೆ ಬಂದ ಭಾಗ್ಯವೆಂದು ಭಾವಿಸುತ್ತೇವೆ.ತಾನು ಮಾಡುವ ಕೆಲಸವನ್ನೇ ದೇವರೆಂದು ತಿಳಿಯುವವರು  ಮಾತ್ರ ವಿಶೇಷ ಮಕ್ಕಳ ಸೇವೆಯಲ್ಲಿ ದೇವರನ್ನು ಕಾಣಲು ಸಾಧ್ಯ*-ಪ್ರಶಾಂತ್ ಶೆಟ್ಟಿ ಪಲಿಮಾರು(ಅದ್ಯಕ್ಶರು ಶಿವಾಯ ಫೌಂಡೇಷನ್)

ಸಂಸ್ಕøತಿ ನಾಡಿನ ಅಂತರ್ಜಲವಿದ್ದಂತೆ :ಎಡನೀರು ಶ್ರೀ ಸಚ್ಚಿದಾನಂದ ಭಾರತೀ

#Infosys foundation ಅಧ್ಯಕ್ಷೆ ಹುದ್ದೆ ತ್ಯಜಿಸಿದ ‘ಸುಧಾಮೂರ್ತಿ’ #SudhaMurty

admin
Author: admin

admin

Share on facebook
Share on twitter
Share on linkedin
Share on whatsapp

ಮತ್ತಷ್ಟು ಓದು

ಓದಲೇಬೇಕು