Suddi Now News

ಸುಡ್ಡಿ ಈಗ ಸುದ್ದಿ

ಕನ್ನಡ

ಕನ್ನಡ

ನ್ಯೂಸ್

ಅಕ್ಷಯ್‌ಕುಮಾರ್ ಅಭಿನಯದ ‘ಬಚ್ಚನ್ ಪಾಂಡೆ ಮಾರ್ಚ್ 18 ರಂದು ಬಿಡುಗಡೆ

ಬಚ್ಚನ್ ಪಾಂಡೆ’ ಚಿತ್ರವನ್ನು ಫರ್ಹಾದ್​ ಸಮ್ಜಿ ನಿರ್ದೇಶನ ಮಾಡಿದ್ದು, ಸಾಜಿದ್​ ನಾಡಿಯದ್ವಾಲಾ ನಿರ್ಮಾಣ ಮಾಡಿದ್ದಾರೆ. ಮಾರ್ಚ್​​ 18ರಂದು ಚಿತ್ರ ತೆರೆಕಾಣಲಿದೆ.ಅಕ್ಷಯ್ ಕುಮಾರ್ ಹಾಗೂ ಕೃತಿ ಸನೋನ್ ಅಭಿನಯದ ‘ಬಚ್ಚನ್ ಪಾಂಡೆ’ (Bachchhan Paandey trailer )ಚಿತ್ರದ ಟ್ರೈಲರ್ ರಿಲೀಸ್ ಆಗಿದೆ.

3.41 ನಿಮಿಷಗಳ ದೀರ್ಘ ಟ್ರೈಲರ್​​ಅನ್ನು ‘ಬಚ್ಚನ್ ಪಾಂಡೆ’ ತಂಡ ರಿಲೀಸ್ ಮಾಡಿದೆ. ಅಕ್ಷಯ್ ಕುಮಾರ್, ಕೃತಿ ಸನೋನ್, ಜಾಕ್ವೆಲಿನ್ ಫರ್ನಾಂಡಿಸ್ ಮೊದಲಾದ ತಾರಾ ನಟರ ದಂಡೇ ಚಿತ್ರದಲ್ಲಿದೆ. ಅಕ್ಷಯ್ ಕುಮಾರ್ ಹಿಂದೆಂದೂ ಕಾಣದ ಅವತಾರದಲ್ಲಿ ಕಾಣಸಿಕೊಂಡಿದ್ದು, ಗ್ಯಾಂಗ್​ಸ್ಟರ್ ಆಗಿ ಅಬ್ಬರಿಸಿದ್ದಾರೆ. 

ಇದು ತಮಿಳಿನ ‘ಜಿಗರ್​ಥಂಡ’ದ ರಿಮೇಕ್.

 ಕೃತಿ ಸನೋನ್ (Kriti Sanon), ಅರ್ಷದ್ ವಾರ್ಸಿ (Arshad Warsi), ಜಾಕ್ವೆಲಿನ್ ಫರ್ನಾಂಡೀಸ್ (Jacqueline Fernandez) ಮತ್ತು ಪಂಕಜ್ ತ್ರಿಪಾಠಿ (Pankaj Tripathi)  ಚಿತ್ರದಲ್ಲಿ ಅವರೊಂದಿಗೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

‘ಬಚ್ಚನ್ ಪಾಂಡೆ’ ಚಿತ್ರವನ್ನು ಫರ್ಹಾದ್​ ಸಮ್ಜಿ ನಿರ್ದೇಶನ ಮಾಡಿದ್ದು, ಸಾಜಿದ್​ ನಾಡಿಯದ್ವಾಲಾ ನಿರ್ಮಾಣ ಮಾಡಿದ್ದಾರೆ. ಮಾರ್ಚ್​​ 18ರಂದು ಚಿತ್ರ ತೆರೆಕಾಣಲಿದೆ.

ಚಾಲೆಂಜಿಂಗ್ ಸ್ಟಾರ್ #ದರ್ಶನ್ ಬರ್ತಡೇಗೆ #ಕ್ರಾಂತಿ’ ಚಿತ್ರದ ಫಸ್ಟ್ ಲುಕ್

ಪುನೀತ್ ರಾಜ್‌ಕುಮಾರ್ #James #Trailer ರಿಲೀಸ್!

admin
Author: admin

admin

Share on facebook
Share on twitter
Share on linkedin
Share on whatsapp

ಮತ್ತಷ್ಟು ಓದು

ಓದಲೇಬೇಕು